ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ತಾಂತ್ರಿಕ ಮಹವಿದ್ಯಾಲಯ (ಸಾಮಾನ್ಯವಾಗಿ ಸರ್ ಎಂವಿಐಟಿ ಎಂದು ಉಲ್ಲೇಖಿಸಲಾಗುತ್ತದೆ) ಕರ್ನಾಟಕದ ಬೆಂಗಳೂರಿನಲ್ಲಿ ನೆಲೆಗೊಂಡಿರುವ ಭಾರತೀಯ ಶಿಕ್ಷಣ ಸಂಸ್ಥೆಯಾಗಿದೆ. ಈ ಸಂಸ್ಥೆಯು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿದೆ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ, ನವದೆಹಲಿಯಿಂದ ಅನುಮೋದಿಸಲಾಗಿದೆ. ಸರ್ ಎಂವಿಐಟಿ ಒಂದು ಐಎಸ್ಒ ೯೦೦೧:೨೦೦೮ ಪ್ರಮಾಣೀಕೃತ ಸಂಸ್ಥೆಯಾಗಿದೆ. ಇದು ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯಕ್ರಮಗಳನ್ನು ನೀಡುತ್ತದೆ. === ಇತಿಹಾಸ === ಈ ಸಂಸ್ಥೆಯನ್ನು ೧೯೮೬ ರಲ್ಲಿ "ಶ್ರೀ ಕೃಷ್ಣದೇವರಾಯ ಎಜುಕೇಷನಲ್ ಟ್ರಸ್ಟ್" ಸ್ಥಾಪಿಸಿತು. ಭಾರತೀಯ ವಿಜ್ಞಾನಿ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಹೆಸರನ್ನು ಇಡಲಾಗಿದೆ. === ಸ್ಥಳ === ಸರ್ ಎಂ ವಿಶ್ವೇಶ್ವರಯ್ಯ ವಿಶ್ವೇಶ್ವರಯ್ಯ ತಾಂತ್ರಿಕ ಮಹವಿದ್ಯಾಲಯ ೧೩೩ ಎಕರೆ ಬಂಜರು ಭೂಮಿಯಲ್ಲಿ ಎನ್ ಹೆಚ್ ೭ ರ ಉದ್ದಕ್ಕೂ, ಉತ್ತರ ಬೆಂಗಳೂರಿನ ಯಲಹಂಕದ ವಾಯುಪಡೆ ನಿಲ್ದಾಣದ ಬಳಿ, ಬೆಂಗಳೂರು ಸಿಟಿ ಜಂಕ್ಷನ್‌ನಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿದೆ. ಇದು ನಗರ ಕೇಂದ್ರದಿಂದ ದೂರವಿದ್ದರೂ, ಸ್ಥಳೀಯ ಬಸ್ಸುಗಳ ಮೂಲಕ ಇಲ್ಲಿಗೆ ಹೋಗಬಹುದು. === ಉಲ್ಲೇಖ ===